ಸುಸ್ಥಿರ ಅಂತರ್ಜಲ ನಿರ್ವಹಣೆ / ಅ.ಅಂ.ಯೋ

ಅವಲೋಕನ

ಅಂತರ್ಜಲ ಸಂಪನ್ಮೂಲವು ಅಭಿವೃದ್ಧಿಯ ಎಲ್ಲಾ ಭಾಗಗಳಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸ.ಜ.ಸಂ.ನಿ ವಿಷಯದಲ್ಲಿ ಸಾಕಷ್ಟು ಗಮನ ಕೇಂದ್ರೀಕರಣ ಅಗತ್ಯತೆಯನ್ನು ಹೊಂದಿದೆ. ಈ ಕೆಳಕಂಡ ವಿಧಾನಗಳ ಮೂಲಕ ಅಂತರ್ಜಲ ಸಂಪನ್ಮೂಲಗಳ ಸುಸ್ಥಿರತೆಗೆ ಸ.ಜ.ಸಂ.ನಿ.ಉ.ಕೇಂ ವು ಅಂತರ್ಜಲ ಯೋಜನೆ ಪರಿಶೀಲನೆ, ಸಮಯ ಆಧಾರಿತ ದತ್ತಾಂಶದ ವಿಶ್ಲೇಷಣೆ, ಪ್ರಸ್ತುತ ಪರಿಸ್ಥಿತಿಯ ಕಾರಣಗಳ ಅವಲೋಕನ, ಜಲ ಮತ್ತು ಶಕ್ತಿ ಸಂಬಂಧ, ಬೆಳವಣಿಗೆಗೊಳ್ಳುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಮತ್ತು ಸಂಬಂಧಿತ ಸಂಸ್ಥೆಗಳ ಸಾಮರ್ಥ್ಯ ನಿರ್ಮಾಣದಲ್ಲಿ ತೊಡಗಿದೆ.

 • ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾಲ್ಗೊಳ್ಳುವಿಕೆ ನೀರು ಭದ್ರತೆ ಯೋಜನೆ ಅಭಿವೃದ್ಧಿ ಮತ್ತು ಉಪ-ಜಲಾನಯನ ಮತ್ತು ತಾಲ್ಲೂಕು
  ಮಟ್ಟದಲ್ಲಿ ಕ್ರೋಡೀಕರಣ.
 • ಸಮುದಾಯ ಆಧಾರಿತ ಬೇಡಿಕೆ ಭಾಗದ ನಿರ್ವಹಣೆ.
 • ನೀರಿನ ಮಟ್ಟ ಮತ್ತು ನೀರಿನ ಗುಣಮಟ್ಟ ಮತ್ತು ಮಾಹಿತಿಯ ಸಾರ್ವಜನಿಕ ಘೋಷಣೆಗೆ ಅಂತರ್ಜಲ ಗಮನ ಕೇಂದ್ರೀಕರಿಸುವ
  ವ್ಯವಸ್ಥೆಯನ್ನು ಬಲಪಡಿಸುವುದು.
 • ಲಭ್ಯತೆ, ದಕ್ಷ ಬಳಕೆ, ನಿರ್ವಹಣೆ, ನಿಯಂತ್ರಣ ಮತ್ತು ಅಂತರ್ಜಲ ಸಂಪನ್ಮೂಲಗಳ ವಿಧಾಯಕಗಳ ಮೇಲೆ ವಿವಿಧ ಪಾಲುದಾರರ
  ಸಾಮರ್ಥ್ಯ ನಿರ್ಮಾಣ.
 • ಅಂತರ್ಜಲ ನಿರ್ವಹಣೆ, ನಿಯಂತ್ರಣ ಮತ್ತು ವಿಧಾಯಕದ ಸಾಂಸ್ತೀಕರಣ.
 • ಕಡಿಮೆ ನೀರು ಬಳಸುವ ಜೀವನೋಪಾಯಗಳು ಮರ ಆಧಾರಿತ ವ್ಯವಸಾಯದೊಂದಿಗೆ ಪಶುಸಂಗೋಪನೆಯ ಉತ್ತೇಜನ.
 • ವಿಭಿನ್ನ ಆಯಾಮದೊಂದಿಗೆ ಒಮ್ಮುಖ ವಿಧಾನದ ಮೂಲಕ ಪೂರೈಕೆ (ಅಂತರ್ಜಲ ಪುನಶ್ಚೇತನ) ಮತ್ತು ಬೇಡಿಕೆ (ನೀರು ಬಳಕೆ
  ದಕ್ಷತೆ) ಕಾರ್ಯಾಚರಣೆ.
 • ಅಂತರ್ಜಲ ನಿರ್ದೇಶನಾಲಯ (ಅಂ.ಜ.ನಿ) ಬಲಪಡಿಸುವುದು.
 • ಕರ್ನಾಟಕ ರಾಜ್ಯ ಅಂತರ್ಜಲ ಕಾಯ್ದೆ ೨೦೧೧ ಮತ್ತು ನಿಯಮಗಳು ೨೦೧೨ರ ಹೇರಿಕೆಗೆ ಅನುವು.
 • ಕೊಳವೆಬಾವಿಗಳಿಗೆ ಅಳತೆ ಮತ್ತು ನಿಗದಿತ ಸಮಯಕ್ಕೆ ಗುಣಮಟ್ಟದ ವಿದ್ಯುತ್ ಸರಬರಾಜು.

ಸ.ಜ.ಸಂ.ನಿ.ಉ.ಕೇಂ ವು ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಕರ್ನಾಟಕದಲ್ಲಿ "ಅಟಲ್ ಅಂತರ್ಜಲ ಯೋಜನೆ
(ಅ.ಅಂ.ಯೋ)" (ರಾಷ್ಟ್ರೀಯ ಅಂತರ್ಜಲ ನಿರ್ವಹಣಾ ಸುಧಾರಣೆ ಯೋಜನೆ) ಸಂಯೋಜನಾ (ನೋಡಲ್ ) ಸಂಸ್ಥೆಯಾಗಿ
ಆಯ್ಕೆಯಾಗಿದೆ.

ಕಾರ್ಯಗಳು ಮತ್ತು ಕಾರ್ಯ ವೈಖರಿ
ಸ.ಜ.ಸಂ.ನಿ.ಉ.ಕೇಂ. ವು ಜ.ಸಂ.ಇ. ಗೆ ಸಲಹಾ ಮಂಡಳಿಯಂತೆ ಸ.ಜ.ಸಂ.ನಿ. ಗೆ ನೀತಿ ಮತ್ತು ಕಾರ್ಯಕ್ರಮಗಳೊಂದಿಗೆ ಸುಸಂಘಟಿಸಲು
ಕಾರ್ಯನಿರ್ವಹಿಸುತ್ತದೆ.
ವಿವಿಧ ಜ.ಸಂ.ಇ. ಸಂಸ್ಥೆಗಳನ್ನು ಸುಸಂಘಟಿಸುವ ಮೂಲಕ ತಮ್ಮ ಸಂಬಂಧಿತ ಮೂಲ ಜವಾಬ್ದಾರಿಗಳನ್ನು ಬಲಪಡಿಸಿಕೊಳ್ಳುವಂತೆ
ಮತ್ತು ಅದರ ಪರಿಣಾಮಗಳನ್ನು ಉತ್ತೇಜಿಸುವಂತೆ ಮಾಡುತ್ತದೆ
ತರಬೇತಿ, ಸಮಾಲೋಚನೆ ಹಾಗೂ ಸ.ಜ.ಸಂ.ನಿ. ಯಲ್ಲಿ ಸಂಶೋಧನೆಯ ಮುಖಾಂತರ ಜ.ಸಂ.ಇ. ಯ ಅಭಿಯಂತರರು ಮತ್ತು ಇತರ
ತಜ್ಞರ ವೃತ್ತಿಪರ ಸಾಮಥ್ರ್ಯಗಳನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಹೆಚ್ಚಿಸುತ್ತದೆ.