ನದಿ ಕೊಳ್ಳ ಮಾದರಿ ರೂಪಿಸುವುದು

ಅವಲೋಕನ

ನದಿ ಕೊಳ್ಳಗಳ ಯೋಜನೆಗಳನ್ನು ಮತ್ತು ನೀರಿನ ಮೂಲಸೌಕರ್ಯ ಕಾರ್ಯನಿರ್ವಹಣೆ ಯೋಜನೆಯನ್ನು ಅಭಿವೃದ್ಧಿಪಡಿಸಲು, ಸ.ಜ.ಸಂ.ನಿ.ಉ.ಕೇಂ ವು ಕೊಳ್ಳ ಮಾದರಿ ರೂಪಿಸುವಿಕೆಯನ್ನು ನದಿ ಕೊಳ್ಳದ ನೀರು ಸಮತೋಲನವನ್ನು ಅರ್ಥ ಮಾಡಿಕೊಳ್ಳಲು, ಬೇಡಿಕೆ ಮತ್ತು ಪೂರೈಕೆ, ಸಂಪನ್ಮೂಲಗಳ ಮೌಲ್ಯಮಾಪನ, ಹೆಚ್ಚಿನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಅತ್ಯವಶ್ಯಕ ಅಭ್ಯಾಸವನ್ನಾಗಿ ಬಳಸಿಕೊಳ್ಳುತ್ತದೆ. ನದಿ ಕೊಳ್ಳದ ಮಾದರಿಯನ್ನು ಅಭಿವೃದ್ಧಿ ಪಡಿಸಲು ದಕ್ಷವಾಗಿರುವ ಸೂಕ್ತ ಮಾಡೆಲಿಂಗ್ ತಂತ್ರಾಂಶವನ್ನು ರುತಿಸಲು ಈ ಕೇಂದ್ರವು ಇ ವಾಟರ್ ಸೋರ್ಸ್ ಮಾಡೆಲ್‍ಅನ್ನು ಗುರುತಿಸಿದೆ, ಈ ತಂತ್ರಾಂಶವು ಆಸ್ಟ್ರೇಲಿಯಾದಲ್ಲಿ ನದಿ ಕೊಳ್ಳದ ಯೋಜನೆ ಹಾಗೂ ನೀರಿನ ಸಂಪನ್ಮೂಲಗಳ ದೈನಂದಿನ ನಿರ್ವಹಣೆಗಾಗಿ ಜಲ ವ್ಯವಸ್ಥಾಪಕರಿಂದ ವ್ಯಾಪಕವಾಗಿ ಅಂಗೀಕೃತವಾಗಿರುವ ಮತ್ತು ಹೆಚ್ಚಾಗಿ ಬಳಸಲ್ಪಡಲಾಗುತ್ತಿದೆ. ಸ.ಜ.ಸಂ.ನಿ.ಉ.ಕೇಂ ದಲ್ಲಿ ಮತ್ತು ನಿಗಮಗಳ ವಲಯ ಕಛೇರಿಗಳಲ್ಲಿ ಕೊಳ್ಳಗಳ ಯೋಜನೆ ಮತ್ತು ಸ.ಜ.ಸಂ.ನಿ ಚಟುವಟಿಕೆಗಳನ್ನು ಬೆಂಬಲಿಸಲು ಹಲವು ಅನುಭವಿ ಮಾಡಲಿಂಗ್ ತಂಡಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಚಟುವಟಿಕೆಗಳನ್ನು ಮುನ್ನಡೆಸಲು, ಜ.ಸಂ.ಇ. ಆಯ್ದ ಅಭಿಯಂತರರಿಗೆ ಇ ವಾಟರ್ ಲಿಮಿಟೆಡ್ ಸಲ್ಯೂಷನ್ಸ್, ಕ್ಯಾನ್‍ಬೆರ್ರಾ, ಆಸ್ಟ್ರೇಲಿಯಾದಲ್ಲಿ ಸೋರ್ಸ್‍ಅನ್ನು ಬಳಸಿ ನದಿ ಕೊಳ್ಳದ ಮಾಡೆಲಿಂಗ್ ತರಬೇತಿಯನ್ನು ನೀಡಲಾಗುತ್ತಿದೆ.