ನೀರು ಬಳಕೆಯ ದಕ್ಷತೆ, ನೀರಿನ ಲೆಕ್ಕಾಚಾರ ಮತ್ತು ನೀರಿನ ಉತ್ಪಾದಕತೆ

ಅವಲೋಕನ

ನೀರು ಬಳಕೆಯ ದಕ್ಷತೆ ಮತ್ತು ಉತ್ಪಾದಕತೆ ಸುಧಾರಣೆಯ ಪ್ರಮುಖ ಉದ್ದೇಶವು ಪರಿಸರ ಸನ್ನಿವೇಶಗಳನ್ನು ಮತ್ತಷ್ಟು ಹದಗೆಡಿಸದೇ ಕೃಷಿಕರ ಆದಾಯವನ್ನು ಹೆಚ್ಚಿಸುವುದಾಗಿದೆ. ಬರದ ಪರಿಣಾಮಗಳನ್ನು ಮತ್ತು ನೀರು, ಪ್ರಮುಖವಾಗಿ ಅಂತರ್ಜಲದ ಹೆಚ್ಚುವರಿ ಹಂಚಿಕೆಯನ್ನು ಸಹ ಉಪಶಮನಗೊಳಿಸುವ ನಿರ್ದಿಷ್ಟ ಅಣತ್ಯತೆಯಿದೆ.

ಈ ಚಟುವಟಿಕೆಯು ನೀರು ಉತ್ಪಾದಕತೆ, ನೀರಿನ ದಕ್ಷ ಬಳಕೆ, ಬೆಳೆ ಮತ್ತು ವ್ಯವಸಾಯ ಉತ್ಪಾದಕತೆ ಮತ್ತು ಜಲ ಸಂಪನ್ಮೂಲ ನಿರ್ವಹಣೆಗೆ ನದಿ ಕೊಳ್ಳದಿಂದ ಹೊಲಗಳಿಗೆ ವಿವಿಧ ಹಂತಗಳಲ್ಲಿ ಅದರ ಪ್ರಾಯೋಗಿಕ ಅಳವಡಿಕೆಯಲ್ಲಿ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ.ಜ.ಸಂ.ನಿ.ಉ.ಕೇಂ ವು ನೀರಿನ ಸಮರ್ಥ ಬಳಕೆ ಮತ್ತು ಉತ್ಪಾದಕತೆ ಮೌಲ್ಯಮಾಪನ ಮಾಡಲು, ಹಾಗೂ ಅದರ ಜೊತೆಗೆ ನದಿ ಕೊಳ್ಳದ ಯೋಜನೆ ಮತ್ತು ನಿರ್ವಹಣೆಯ
ಬೆಂಬಲಿಸಲು ನದಿ ಕೊಳ್ಳದ ಹಂತದಲ್ಲಿ ನೀರಿನ ಸಮರ್ಥ ಬಳಕೆ ಮತ್ತು ನೀರಿನ ಉತ್ಪಾದಕತೆಯ ದೂರ ಸಂವೇದಿಯನ್ನು
ಕೈಗೊಳ್ಳುತ್ತಿದೆ.

ಸ.ಜ.ಸಂ.ನಿ.ಉ.ಕೇಂ ವು ನೀರಾವರಿ ವ್ಯವಸ್ಥೆ ಆಧುನೀಕರಣ ಮತ್ತು ಸ್ವಯಂಚಾಲನೆಗಾಗಿ ಅಂತರರಾಷ್ಟ್ರೀಯ ಅಭ್ಯಾಸಗಳನ್ನು ಪರಿಚಯಿಸುವಲ್ಲಿ ಸಕ್ರಿಯವಾಗಿದೆ. ಅದು ನೀರಾವರಿ ವ್ಯವಸ್ಥೆಗಳ ಆಧುನೀಕರಣಕ್ಕಾಗಿ ಒಕ್ಕೂಟ ರಾಷ್ಟ್ರಗಳ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಅಭಿವೃದ್ಧಿಪಡಿಸಲಾದ ಮಾಸ್ಕಟ್ ವಿಧಾನದ ಬಳಕೆಯಲ್ಲಿ ಜ.ಸಂ.ಇ. ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದೆ.