ದೂರ ಸಂವೇದಿ ಮತ್ತು ಜಿಐಎಸ್ ಬಳಸಿ ನೀರಿನ ಉತ್ಪಾದಕತೆಯ ಮೌಲ್ಯಮಾಪನದ ಮುಂದುವರೆದ ತರಬೇತಿ

“ದೂರ ಸಂವೇದಿ ಮತ್ತು ಜಿಐಎಸ್ ಬಳಸಿ ನೀರಿನ ಉತ್ಪಾದಕತೆಯ ಮೌಲ್ಯಮಾಪನ” ಕುರಿತ ಮುಂದುವರೆದ ತರಬೇತಿಯನ್ನು ಡಾ. ಸಾಜಿದ್ ಪರೀತ್, ದೂರ ಸಂವೇದಿ ಉಪನ್ಯಾಸಕರು  ಯುನೆಸ್‌ಕೋ-ಐಹೆಚ್ಇ, ಡೆಲ್ಫ್ಟ್, ನೆದರ್ಲ್ಯಾಂಡ್ಸ್ ಇವರ ನೇತೃತ್ವದಲ್ಲಿ 05 ಮತ್ತು 06 ಮಾರ್ಚ್ 2020 ರಂದು  ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಅಚ್ಚುಕಟ್ಟು ಪ್ರದೇಶದಲ್ಲಿ ದೂರ ಸಂವೇದಿ ಆಧಾರಿತ ನೀರಿನ ಉತ್ಪಾದಕತೆಯ ಮೌಲ್ಯಮಾಪನವನ್ನು ಮಾಡಲಾಗುತ್ತಿದೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ATREE, ಬೆಂಗಳೂರು ನಿಂದ ತರಬೇತಿಯಲ್ಲಿ ಭಾಗವಹಿಸಿದ್ದರು.

ನಾರಾಯಣಪುರ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದ ಅಧಿಕಾರಿಗಳಾದ                ಶ್ರೀ. ರಂಗರಾಮ್ ಎಸ್, ಮುಖ್ಯ ಇಂಜಿನಿಯರ್ (ಪ್ರಭಾರ), ಕೃಭಾಜನಿನಿ ನಿರ್ವಹಣೆ ಮತ್ತು ಪೋಷಣೆ ವಲಯ, ನಾರಾಯಣಪುರ ಮತ್ತು ಶ್ರೀ. ಸುಬಾಶ್ ಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೃಭಾಜನಿನಿ ಐಬಿಸಿ ಉಪ ವಿಭಾಗ .24, ರಾಂಪುರ ಪಿಎ, ವಿಜಯಪುರ ಇವರು ದಿನಾಂಕ: 06-03-2020ರಂದು ನಡೆದ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆಗಳನ್ನು ನೀಡಿದರು.