“ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ” ಕುರಿತು ಒಂದು ದಿನದ ಕಾರ್ಯಾಗಾರ

ರಾಷ್ಟ್ರೀಯ ಜಲ ಮಿಷನ್, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಇಲಾಖೆ, ಭಾರತ ಸರ್ಕಾರ ಮತ್ತು ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ ಸಹಭಾಗಿತ್ವದಲ್ಲಿ “ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ” ಕುರಿತು ಒಂದು ದಿನದ ಕಾರ್ಯಗಾರವನ್ನು ದಿನಾಂಕ: 22-01-2019ರಂದು ಡಾ|| ಬಾಬು ರಾಜೇಂದ್ರ ಪ್ರಸಾದ ಅಂತರ ರಾಷ್ಟ್ರೀಯ ಸಮಾವೇಶ ಭವನ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ), ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ 156 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿರುವುದು ತಮಗೆ ತಿಳಿದಿರುವ ವಿಷಯವಾಗಿದೆ. ಸತತ ಬರಗಾಲದಿಂದ ರಾಜ್ಯದಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು ಅದನ್ನು ನೀಗಿಸಲು ರೈತರು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಪ್ರಗತಿಪರ ಚಿಂತಕರು ತಮ್ಮದೇ ಆದ ರೀತಿಯಲ್ಲಿ ಹಲವಾರು ಯಶಸ್ವಿ ವಿಧಾನಗಳನ್ನು ಅನುಸರಿಸಿರುತ್ತಾರೆ. ಈ ಸಂದರ್ಭದಲ್ಲಿ ಅಂತಹ ಯಶಸ್ವಿ ವಿಧಾನಗಳನ್ನು ಹಂಚಿಕೊಳ್ಳಲು ಈ ಕಾರ್ಯಗಾರವು ಒಳ್ಳೆಯ ವೇದಿಕೆ ಆಗಿರುತ್ತದೆ.

ಸಮುದಾಯ ಪ್ರಕ್ರಿಯೆಗಳ ಮೂಲಕ ಸುಧಾರಿತ ಅಂತರ್ಜಲ ನಿರ್ವಹಣೆ, ಸ್ಥಳೀಯ ಸಾಮಥ್ರ್ಯ ಬಲವರ್ಧನೆ, ದುರ್ಬಲ ಮತ್ತು ಅತೀ ಶೋಷಿತ ಅಂತರ್ಜಲ ಪ್ರದೇಶಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯಗಳ ನಡುವೆ ಜ್ಞಾನ ವಿನಿಮಯ ಕಾರ್ಯಗಾರದ ಉದ್ದೇಶವಾಗಿದೆ. ಕಾರ್ಯಗಾರದಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಆಯ್ದ ತಾಲುಕುಗಳ ಗ್ರಾಮ ಪಂಚಾಯತಿಯ ಎಲ್ಲಾ ಅಧ್ಯಕ್ಷರುಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಕಾರ್ಯಾಗಾರದ ಉದ್ಘಾಟನೆಯನ್ನು ಕೆಳಕಂಡ ಸಚಿವರು ನೆರವೇರಿಸಿ ಸಮಾಲೋಚನೆ ನಡೆಸುವರು.

  1. ಶ್ರೀ ಅರ್ಜುನ್ ರಾಮ್ ಮೇಘವಾಲ, ಮಾನ್ಯ ರಾಜ್ಯ ಸಚಿವರು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಇಲಾಖೆ, ಭಾರತ ಸರ್ಕಾರ
  2. ಶ್ರೀ ಡಿ.ಕೆ. ಶಿವಕುಮಾರ, ಮಾನ್ಯ ಸಚಿವರು, ಬೃಹತ್ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ
  3. ಶ್ರೀ ಕೃಷ್ಣ ಬೈರೆಗೌಡ, ಮಾನ್ಯ ಸಚಿವರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ
  4. ಶ್ರೀ ಎನ್. ಹೆಚ್. ಶಿವಶಂಕರ ರೆಡ್ಡಿ, ಮಾನ್ಯ ಸಚಿವರು, ಕೃಷಿ ಇಲಾಖೆ, ಕರ್ನಾಟಕ ಸರ್ಕಾರ
  5. ಶ್ರೀ ಸಿ.ಎಸ್. ಪುಟ್ಟರಾಜು, ಮಾನ್ಯ ಸಚಿವರು, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಸರ್ಕಾರ

ಅಂತರ್ಜಲ ಸಂಬಂಧಿತ ವಸ್ತು ಪ್ರದರ್ಶನ ಉದ್ಘಾಟನೆಯನ್ನು 12.45 ಕ್ಕೆ ಶ್ರೀ ಡಿ.ಕೆ. ಶಿವಕುಮಾರ, ಮಾನ್ಯ ಸಚಿವರು, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ ರವರು ನೆರವೇರಿಸುವರು. ತದನಂತರ ಮಾನ್ಯ ಸಚಿವರುಗಳಿಂದ ಪತ್ರಿಕಾಗೋಷ್ಢಿ ನಡೆಸುವರು.

ಹೆಚ್ಚಿನ ಮಾಹಿತಿಗಾಗಿ ಶ್ರೀ. ಎಂ.ಎಸ್. ರವಿಪ್ರಕಾಶ್, ಇವರನ್ನು ಮೊಬೈಲ್: 9449694890 ರಲ್ಲಿ ಸಂಪಕಿಸಬಹುದಾಗಿದೆ.ಈ ಕಾರ್ಯಾಗಾರದ ಕಾರ್ಯಕ್ರಮ ಪಟ್ಟಿಯನ್ನು ಲಗತ್ತಿಸಲಾಗಿದೆ. ಇಲ್ಲಿ ಡೌನ್-ಲೋಡ್ ಮಾಡಿ